ಗಣಕಯಂತ್ರ ಚಿತ್ರ ನಿರ್ಮಾಣ ಗಣಕ ವಿಜ್ಞಾನದ ಒಂದು ಉಪಕ್ಷೇತ್ರ. ಇಲ್ಲಿ ದೃಶ್ಯ ಮಾಹಿತಿಗಳನ್ನು ಹುಟ್ಟಿಸುವ ಹಾಗೂ ಸಂಸ್ಕರಿಸುವ ಪದ್ಧತಿಗಳ ಅಧ್ಯಯನ ಮಾಡಲಾಗುತ್ತದೆ. ಈ ಪದವನ್ನು ಹೆಚ್ಚಾಗಿ ತ್ರಿ-ಆಯಾಮ ಗಣಕ ಚಿತ್ರಾಭಿವ್ಯಕ್ತದ ಅಧ್ಯಯನಕ್ಕೆ ಬಳಸಿದರೂ ಇದು ದ್ವಿ-ಆಯಾಮ ಗಣಕ ಚಿತ್ರಾಭಿವ್ಯಕ್ತ ಮತ್ತು ಚಿತ್ರ ಸಂಸ್ಕರಣೆಗಳನ್ನೂ ಒಳಗೊಂಡಿದೆ. ಈ ಕ್ಷೇತ್ರದ ಬೆಳವಣಿಗೆಯಿಂದ ಗಣಕಯಂತ್ರಗಳ ಸಂವಹನ ಇನ್ನೂ ಸರಳಗೊಂಡಿದೆ. ಅಷ್ಟೇ ಅಲ್ಲದೆ ಲಭ್ಯವಿರುವ ಮಾಹಿತಿಗಳನ್ನು ಇನ್ನೂ ಚೆನ್ನಾಗಿ ಅರ್ಥೈಸಿಕೊಳ್ಳಲು ಇದು ಸಹಕಾರಿಯಾಗಿದೆ. ಈ ಕ್ಷೇತ್ರದ ಅಭಿವೃಧ್ಧಿ ವಿವಿಧ ರೀತಿಯ ಮಾಧ್ಯಮಗಳ ಮೇಲೆ ಗಾಢವಾದ ಪ್ರಭಾವವನ್ನು ಬೀರಿದೆ ಹಾಗು ಚಿತ್ರೋದ್ಯಮ, ದೃಶ್ಯಕ್ರೀಡೆ ಮತ್ತು ಆನಿಮೇಶನ್ ಉದ್ಯಮಗಳಲ್ಲಿ ಕ್ರಾಂತಿಯುಂಟುಮಾಡಿದೆ. == ಸ್ಥೂಲ ನೋಟ == ಇಲ್ಲಿ ಗಣನಾತ್ಮಕ ತಂತ್ರಗಳಿಂದ ದೃಶ್ಯ ಹಾಗೂ ಜಾಮಿತಿಗೆ ಸಂಭಂದಿತ ಮಾಹಿತಿಗಳನ್ನು ಸಂಸ್ಕರಿಸಲಾಗುತ್ತದೆ. ಈ ಕ್ಷೇತ್ರವು ಚಿತ್ರದ ಕಲಾತ್ಮಕತೆ ಹಾಗೂ ಸೌಂದರ್ಯತೆಯ ಬದಲು ಚಿತ್ರ ನಿರ್ಮಾಣದ ಮತ್ತು ಸಂಸ್ಕರಣದ ಮೂಲ ಗಣನಾತ್ಮಕ ತತ್ವಗಳಿಗೆ ಕೇಂದ್ರೀಕೃತವಾಗಿದೆ. ಸಂಭದಿತ ವಿಶಯಗಳು ಈ ಕೆಳಗಿನಂತಿವೆ: ವೈಜ್ಞಾನಿಕ ದೃಷ್ಟೀಕರಣ ಮಾಹಿತಿ ದೃಷ್ಟೀಕರಣ ಗಣಕ ದೃಷ್ಟಿ ಚಿತ್ರ ಸಂಸ್ಕರಣೆ ಗಣನಾತ್ಮಕ ಜಾಮಿತಿ ಉಪಯುಕ್ತ ಗಣಿತ ಈ ಕ್ಷೇತ್ರದ ಉಪಯೋಗಗಳು: ವಿಶೇಷ ಎಫ್ಫೆಕ್ಟ್ಸ್ ವಿಶ್ಯುವಲ್ ಎಫ್ಫೆಕ್ಟ್ಸ್ ದೃಶ್ಯಕ್ರೀಡೆ ಅಂಕೀಯ ಕಲೆ == ಉಪ ಕ್ಷೇತ್ರಗಳು == ಈ ಕ್ಷೇತ್ರದ ಪ್ರಮುಖ ಉಪ ಕ್ಷೇತ್ರಗಳನ್ನು ವಿಶಾಲವಾಗಿ ಹೀಗೆ ವರ್ಗೀಕರಿಸಬಹುದು: ಜಾಮಿತಿ: ವಸ್ತು ಮಾದರಿಯನ್ನು ಯಂತ್ರಮಾದರಿಯಲ್ಲಿ ಪ್ರತಿನಿಧಿಸಲು ಮತ್ತು ಸಂಸ್ಕರಿಸಲು ಬೇಕಾಗುವ ತಂತ್ರಜ್ಞಾನದ ಅಧ್ಯಯನ. ಆನಿಮೇಶನ್: ಚಲನೆಯನ್ನು ಯಂತ್ರಮಾದರಿಯಲ್ಲಿ ಪ್ರತಿನಿಧಿಸಲು ಮತ್ತು ಸಂಸ್ಕರಿಸಲು ಬೇಕಾಗುವ ತಂತ್ರಜ್ಞಾನದ ಅಧ್ಯಯನ. ಚಿತ್ರಾಭಿವ್ಯಕ್ತ: ಕಿರಣಚಾಲನೆಯನ್ನು ಯಂತ್ರಮಾದರಿಯಲ್ಲಿ ಮರುಸೃಷ್ಟಿಸುವ ಕ್ರಮಾವಳಿಗಳ ಅಧ್ಯಯನ. ಚಿತ್ರೀಕರಣ: ಚಿತ್ರಾರ್ಜನೆ, ಚಿತ್ರಾವೃತ್ತಿ ಮತ್ತು ಅವುಗಳ ಸಂಪಾದನೆಗೆ ಬೇಕಾಗುವ ತಂತ್ರಜ್ಞಾನದ ಅಧ್ಯಯನ. == ಇವುಗಳನ್ನೂ ನೋಡಿ == ತ್ರಿ-ಆಯಾಮ ಗಣಕ ಚಿತ್ರಾಭಿವ್ಯಕ್ತ ವಸ್ತ್ರ ಮಾದರೀಕರಣ ಗಣಕ ಮುಖ ಸಂಸ್ಕರಣ ಅಂಕೀಯ ಜಾಮಿತಿ ಅಂಕೀಯ ಚಿತ್ರ ಸಂಪಾದನೆ ಜಾಮಿತೀಯ ಸಂಸ್ಕರಣ ಚಿತ್ರ ಸಂಸ್ಕರಣಾ ಘಟಕ () ಬಣ್ಣಗಾರನ ಕ್ರಮಾವಳಿ (ಸಿಗ್ಗ್ರಾಫ್) ಸ್ಟ್ಯಾನ್ಫರ್ಡ್ ಬನ್ನೀ ಉಥಾ ಟೀ ಕುಡಿಕೆ == ಹೆಚ್ಚಿನ ಓದಿಗಾಗಿ == ಫೋಲೇ ಮತ್ತಿತರರು. : . ಶಿರ್ಲೇ. . ವ್ಯಾಟ್. 3D . == ಬಾಹ್ಯ ಕೊಂಡಿಗಳು == ಗಣಕಯಂತ್ರ ಚಿತ್ರ ನಿರ್ಮಾಣದ ಮತ್ತು ಆನಿಮೇಶನ್ ಕ್ಷೇತ್ರದ ಇತಿಹಾಸ 2007-04-05 ವೇಬ್ಯಾಕ್ ಮೆಷಿನ್ ನಲ್ಲಿ. ಗಣಕಯಂತ್ರ ಚಿತ್ರ ನಿರ್ಮಾಣದ ಇತಿಹಾಸ ಲೇಖನಗಳ ಸರಣಿ 2007-03-02 ವೇಬ್ಯಾಕ್ ಮೆಷಿನ್ ನಲ್ಲಿ. == ವಿಶ್ವವಿದ್ಯಾನಿಲಯಗಳ ಕೊಡುಗೆ == 2009-06-01 ವೇಬ್ಯಾಕ್ ಮೆಷಿನ್ ನಲ್ಲಿ. 2007-10-13 ವೇಬ್ಯಾಕ್ ಮೆಷಿನ್ ನಲ್ಲಿ. C²G² , - , , 2011-06-07 ವೇಬ್ಯಾಕ್ ಮೆಷಿನ್ ನಲ್ಲಿ. -- 2007-06-10 ವೇಬ್ಯಾಕ್ ಮೆಷಿನ್ ನಲ್ಲಿ. 2017-09-14 ವೇಬ್ಯಾಕ್ ಮೆಷಿನ್ ನಲ್ಲಿ. 2011-06-08 ವೇಬ್ಯಾಕ್ ಮೆಷಿನ್ ನಲ್ಲಿ. 2017-09-23 ವೇಬ್ಯಾಕ್ ಮೆಷಿನ್ ನಲ್ಲಿ. 2019-07-18 ವೇಬ್ಯಾಕ್ ಮೆಷಿನ್ ನಲ್ಲಿ. () 2007-07-08 ವೇಬ್ಯಾಕ್ ಮೆಷಿನ್ ನಲ್ಲಿ. - 2011-07-19 ವೇಬ್ಯಾಕ್ ಮೆಷಿನ್ ನಲ್ಲಿ. / 2007-08-18 ವೇಬ್ಯಾಕ್ ಮೆಷಿನ್ ನಲ್ಲಿ. 2014-12-05 ವೇಬ್ಯಾಕ್ ಮೆಷಿನ್ ನಲ್ಲಿ. @ 2001-02-01 ವೇಬ್ಯಾಕ್ ಮೆಷಿನ್ ನಲ್ಲಿ. 2011-04-26 ವೇಬ್ಯಾಕ್ ಮೆಷಿನ್ ನಲ್ಲಿ. 2006-12-19 ವೇಬ್ಯಾಕ್ ಮೆಷಿನ್ ನಲ್ಲಿ. , 2011-02-04 ವೇಬ್ಯಾಕ್ ಮೆಷಿನ್ ನಲ್ಲಿ. , Bogotá, 2007-06-26 ವೇಬ್ಯಾಕ್ ಮೆಷಿನ್ ನಲ್ಲಿ. -